ನನ್ನವನು
ರಚನೆ : ರತ್ನ ಕೆಂಭವಿಮಠ
----------------------------------
ಅಂತರದಲಿ ಅನಂತತೆ ಇದ್ದರು ಅಂತರಂಗಕೆ ತೀರಾ ಹತ್ತಿರದವನು ನೀನು ನೀಗಾಗಿರು ನಾನು ನಾನಾಗಿಯೇ ಇರುವೆ ಪ್ರೀತಿಯ ರಂಗು ಬೇಡ ಆಡಂಬರದ ಹಂಗು ಬೇಡ ನಿನ್ನವನಾಗಿಯೇ ಇರುವೇನು ನಿನಗಾಗಿಯೇ ಇರುವೇನು ಇರುವಷ್ಟು ದಿನ ಒಂದು ಅದ್ಭುತ ಪ್ರೇಮ ಕಥೆಯಾಗಿಯೇ ಮಾದರಿಯಂತೆ ಇರುವ ಎಂದವನು ನನ್ನವನು.
----------------------------------
ನೋಂದಣಿ ಐಡಿ : KPFS2-8093