Submission 4403

ಕನ್ನಡವು ಹೇಳಿತು

ರಚನೆ : ನವೀನ್ ವೀರಭದ್ರ

----------------------------------

ಕನ್ನಡದ ಕುವರನೆ ಕನ್ನಡವ ಮಾತಾಡು ಕನ್ನಡದಿ ಕುಣಿದು ಕವಿಯಾಗಿ ಓಲಾಡು । ಅಂತರಾತ್ಮದಿ ಹುದುಗಿ ಮರೆಯಾದ ಬಾಗಿಲ ತಟ್ಟು ಸಿಡಿದೆದ್ದು ಕೆಂಪು ಹಳದಿ ಬಾವುಟವ ಕಟ್ಟು ॥ ನಾಲಗೆಯಲಿ ನಲಿಯಲಿ ಕವಿ ಕಾಳಿದಾಸನಂತೆ ಹಸ್ತದಲಿ ಹರಿಯಲಿ ರವಿ ರಾಘವಾಂಕನಂತೆ । ಸುತ್ತೆಲ್ಲ ಹರಡಲಿ ಕನ್ನಡದ ಕೆಚ್ಚು ಬಡಿದು ಬಿಡಿಸೆಲ್ಲರ ಪರಕೀಯದ ಹುಚ್ಚು ॥ ತೊದಲಬೇಡ ನೀ ನನ್ನುಡಿ ನುಡಿವಾಗ ನಾನಿರುವೆ ನಿನಗಾಗಿ ನಿನ್ನಂತರಾಳದಲಿ । ಕಣ್ಮುಚ್ಚಿ ನೆನೆದೊಡನೆ ಕುಣಿವೆ ನಿನ್ನರವಿಂದದಲಿ ನಲಿವೆ ನಿನ್ನ ನಯನ ತೇಜದಲಿ ॥ ನಲಿಸು ನೀ ಕರುನಾಡ ಮನಸುಗಳ ಕನ್ನಡದ ತಾಳದಲಿ ಕನ್ನಡದ ಮೇಳದಲಿ ॥

----------------------------------

ನೋಂದಣಿ ಐಡಿ : KPFS2-8087

0
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top