ಸಸ್ಯ ಶಾಮಲೆಯಾಗುವಾಸೆ
ರಚನೆ : ಲಕ್ಷ್ಮೀದೇವಿ ವೈ.ಹೆಚ್
----------------------------------
ಜಡಿಮಳೆಯಂತಹ ಪ್ರೀತಿ ಇದ್ದಕಿದ್ದ ಹಾಗೆ ಮರೆಯಾದರೂ ಮಳೆ ನಿಂತರೂ ಮರದ ಹನಿ ನಿಲ್ಲದ ಹಾಗೆ ಪ್ರೀತಿ ಹನಿಗಳ ಚುಮುಕಿಸುವಾಸೆ ಸುಡು ಬಿಸಿಲಿನಲ್ಲೂ ಬಿಸಿಲ ಸಹಿಸಿ ತಣ್ಣನೆಯ ನೆರಳ ಹೊದಿಸುವಾಸೆ ತನ್ನ ಬಯಸಿ ಬರುವ ಜೀವವ ಮಡಿಲಲಿ ಬೆಚ್ಚಗೆ ಬಚ್ಚಿಟ್ಟುಕೊಳ್ಳುವಾಸೆ ಹಸಿದ ಜೀವಕೆ ತನ್ನಲ್ಲಿರುವ ಕಾಯಿ ಹಣ್ಣುಗಳ ತಿನ್ನಿಸುವಾಸೆ ಉಸಿರಿಗೆ ಉಸಿರು ಕೊಟ್ಟು ಉಸಿರಾಗುವಾಸೆ ಉಸಿರು ನಿಂತಾಗ ಒಡಲೊಳಗೆ ಬೆರೆಸಿಕೊಂಡು ತನ್ನೊಂದಿಗೆ ಪಂಚಭೂತಗಳಲಿ ಲೀನವಾಗುವಾಸೆ ಅಂತ್ಯದಲ್ಲೂ ಪ್ರೀತಿಯ ಅಪ್ಪುಗೆಯೊಂದಿಗೆ ಕೊನೆಯಾಗುವಾಸೆ ನಾನೂ ಸಸ್ಯ ಶಾಮಲೆಯಾಗುವಾಸೆ
----------------------------------
ನೋಂದಣಿ ಐಡಿ : KPFS2-8084