ಸಿಂಧೂರ
ರಚನೆ : ಅಖಿಲ ಲಕ್ಷ್ಮಿ.ಕೆ
----------------------------------
ಎನ್ನ ಮನೆಯಂಗಳದಿ ಬಿರಿದ ಕುಸುಮವೆ ನೀನು ಘಮಲು ಮಾಡಲಿ ಅಮಲು ಜ್ಞಾನ ದೀವಿಗೆ ಹಿಡಿದು || ಎಲ್ಲರೊಳಗೊಂದಾಗು ಪ್ರೀತಿಯನು ನೀ ಕಾಣು ಅನ್ಯಾಯ ಮೋಸ ದ್ವೇಷಗಳ ನೀ ತೊಡೆದು ಹಾಕು || ನಮ್ಮ ಮನೆತನದ ಕುವರಿ 'ಸಿಂಧೂರ ' ತಿಲಕವಿಡು ಭರತ ಮಾತೆಯ ಹಣೆಗೊಂದು ಜಾರದಿರಲೆಂದು ಅಶ್ರುಬಿಂದು ||
----------------------------------
ನೋಂದಣಿ ಐಡಿ : KPFS2-8077