Submission 4367

ತಂದೆಯ ತ್ಯಾಗ

ರಚನೆ : ಪ್ರತಿಭಾ

----------------------------------

ಅರತಿಗೊಂದು ಕಿರತಿಗೊಂದು ಪಡೆದು ಮಕ್ಕಳ ನಗುವಿನಲಿ ತಮ್ಮ ನಗೆಯ ಕಂಡು ಬೇಡಿದನು ಕರುಣಿಸುವ ಕರುಣಾಕಾರ ಹೆಗಲ ಮೇಲೆ ಕೂರಿಸಿಕೊಂಡು ಕೂಸುಮರಿ ಮಾಡಿಸುವ ಕನಸುಗಾರ ವಿದ್ಯೆಯನ್ನು ದಯಪಾಲಿಸುವ ವಿದ್ಯಾಧರ ದುಡಿದು ಬದುಕಿಸುವ ಸ್ವಾಭಿಮಾನ ಅಪ್ಪ ಕೈ ಹಿಡಿದು ನಡೆಸುವ ಕಣ್ಮಣಿ ನೋವು ನನಗಿರಲಿ ನಲಿವು ಮಕ್ಕಳಿಗಿರಲಿ ಸಂತೋಷ ಮನೆಯ ಮನ ತುಂಬಿರಲಿ ಸಮಾಜದಲಿ ಬದುಕಿನ ಪಾಠ ಕಲಿಸುವ ಮಾರ್ಗದರ್ಶಕ ಸಾಲಸೂಲವ ಮಾಡಿ ಶಿಕ್ಷಣ ಕೊಡಿಸುವ ದೈವದೂತಕ ಮಕ್ಕಳ ಓದಿನಲಿ ಓಲವ ಕಂಡ ಛಲಗಾರ ಬದುಕು ಸುಂದರಗೊಳಿಸುವ ಸೊಗಸುಗಾರ ಮಕ್ಕಳ ಮುಖದಲಿ ಸಂತೋಷ್ ಫಲಿಸುವ ದೇವರು ಅವರೇ ನನ್ನ ಅಪ್ಪ

----------------------------------

ನೋಂದಣಿ ಐಡಿ : KPFS2-8053

7
Votes
112
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top