Submission 4355

ಮುಗ್ಧ ಮನದ ಮಕ್ಕಳು

ರಚನೆ : ನಂದಾ ಎಸ್.ಎನ್

----------------------------------

ಸ್ಮಿತ ವದನದಲಿ ಮನಸೆಳೆಯುವ ಚಿಣ್ಣರೆ, ತೊದಲು ನುಡಿಯಲೇ, ಪ್ರಭಾವಿಸುವ ಪುಟಾಣಿಗಳೆ. ಹಾಲ್ಬಿಳುಪಿನ ಮನದ ಮುಗ್ಧರೆ, ತಂಟೆ,ತರಲೆ, ಚೇಷ್ಟೆಯ ತುಂಟರೆ. ಪರಿವಾರದಲಿ ನಗೆ ಹರಡುವ ಅವಧೂತರೆ. ಭವ್ಯ ಭವಿಷ್ಯದ ಕನಸ ಕಂದಮ್ಮಗಳೆ, ಕಾರ್ಮೋಡವನು ಬೆಳಗುವ ಶಶಿ ನೇಸರರೇ, ನಾಳೆಯ ನಂಬುಗೆಯ ಒಲುಮೆಯ ಸಿರಿ ಸಿಂಚನರೇ.

----------------------------------

ನೋಂದಣಿ ಐಡಿ : KPFS2-8047

10
Votes
168
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top