Submission 4306

ಕ್ಷಮಿಸುವೇಯಾ?

ರಚನೆ : ರಮೇಶ ಪಾಟೀಲ

----------------------------------

ಕ್ಷಮಿಸಿಬಿಡು ಗೆಳತಿ, ಸಾಧ್ಯವಾದರೆ ಒಮ್ಮೆ ನನ್ನನ್ನು... ಪ್ರೀತಿಸುವ ಹಕ್ಕಿದ್ದರು ನಿನ್ನ ಪಡೆದುಕೊಳ್ಳುವ ಯೋಗ್ಯತೆ ಇಲ್ಲದ ಈ ಅಯೋಗ್ಯನನ್ನು ಕ್ಷಮಿಸಿಬಿಡು... ನಿನ್ನ ಹಠವನ್ನೇ ಎತ್ತಿ ಹೇಳಿ ನಿನ್ನ ಮನದ ಭಾವನೆಗಳ ಅರಿಯದ ಈ ಅರಿಗೇಡಿಯನ್ನು ಕ್ಷಮಿಸಿಬಿಡು... ನಿನ್ನ ಸಿಟ್ಟನ್ನು ತಿಳಿದಷ್ಟು ಈ ಜೀವನದ ಸಾರ ತಿಳಿದುಕೋಳ್ಳಲಾಗದ ಈ ತಿಳಿಗೆಡಿಯನ್ನು ಕ್ಷಮಿಸಿಬಿಡು... ಕ್ಷಮಿಸಿಬಿಡು ಗೆಳತಿ ಸಾಧ್ಯವಾದರೆ, ನಿಸ್ವಾರ್ಥ ಪ್ರೀತಿಯನು ಗೆದ್ದು ನಿನ್ನ ಪಡೆದುಕೊಳ್ಳುವುದರಲ್ಲಿ ಸೋತಿರುವ ಈ ನಿನ್ನ ನತದೃಷ್ಟ ಗೆಳೆಯನನ್ನು...

----------------------------------

ನೋಂದಣಿ ಐಡಿ : KPFS2-8008

17
Votes
197
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top