Submission 4300

ಕನಸು

ರಚನೆ : ಭೂಮಿಕಾ ಬಿ ಜಿ

----------------------------------

ಕಣ್ಣು ಮುಚ್ಚಿ ಕಾಣುವ ಕನಸಿಗಿಂತ ಕಣ್ಣು ತೆರೆದು ಕಾಣುವ ಕನಸೇ.. ಹೆಚ್ಚು, ಏಣಿಸಲಾಗದ ನಕ್ಷತ್ರದಂತೆ ಕಂಡ ಕನಸು ಕೂಡ ದೂರ ಸರಿದು ನಿಂತಂತಿದೆ ಮನದೊಳಗೆ ಮಾತಾಗಿ.. ಮೇಲ್ನೋಟಕ್ಕೆ ಮುಗುಳ್ನಕ್ಕಂತಿದೆ, ಕಂಡ ಕನಸು..ಕಣ್ಣಂಚಲಿ ನೀರಾಗಿ, ತೀರಾ ಸೇರಿದಂತೆ ಭಾಸವಾಗುತ್ತಿದೆ, ಆದರೂ.... ನಿಂತಂತಿದೆ ಕನಸು ಸಾಧನೆಯ ಪಥದಲಿ ಸವಾಲುಗಳನ್ನು ಎದುರಿಸುವ ಆಶಯದಲಿ, ಕಂಡ ಕನಸನು ನನಸಾಗಿಸೋ ಭರವಸೆಯ ಹಾದಿಯಲಿ.

----------------------------------

ನೋಂದಣಿ ಐಡಿ : KPFS2-8002

7
Votes
198
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top