ಒಂಟಿ ಹಕ್ಕಿ
ರಚನೆ : ನಲಿನಾ ಸಿ
----------------------------------
ನಾನೊಂದು ಒಂಟಿ ಹಕ್ಕಿ.... ಕೇಳುವವರರಿಲ್ಲಾ ನಾ ಅತ್ತರು ಬಿಕ್ಕಿ ಬಿಕ್ಕಿ ಬೆಳಕು ನೀಡುವೆ ಆದರೂ ಒಂಟಿ ಚುಕ್ಕಿ ಕಷ್ಟಗಳು ಹೆಚ್ಚಾಗಿ ಕಿತ್ತಂತಾಗಿವೆ ರೆಕ್ಕಿ ನಾ ಹೇಗೆ ಹಾರಲೆಳು ಸಂತೋಷ ಸಾಗರಕ್ಕೆ ಮುಂಬರುವ ದಿನಗಳು... ಕಠಿಣ ವಾಗುತ್ತಿವೆ ಹಗಲಿರುಳು ಮುಂದೆ ಹೇಗೆ ನನ್ನ ಬಾಳು ತಿನ್ನಲು ಸಿಗಲಾರದು ಹೊಲದಲ್ಲಿ ಒಂದ್ ಕಾಳು ನಾ ಹೇಗೆ ಸಂತೋಷ ಸಾಗರಕ್ಕೆ ಹಾರಲೆಳು ಕಷ್ಟ ಎಷ್ಟು ಬಂದರೇನು? ತಾಳಿಕೊಂಡು ಬಾಳು ನೀನು ಆಗ ಆಗುವದು ನಿನ್ ಬಾಳು ಜೇನು ಎಂದು ಹಿರಿಯರು ಹೇಳಿಲ್ಲವೇನು? ಸಂತೋಷದ ವೇಳೆಗಾಗಿ ಕಾಯುವೆನು ನಾನು.
----------------------------------
ನೋಂದಣಿ ಐಡಿ : KPFS2-7986