Submission 4270

ಮನವು ಮಲ್ಲಿಗೆ ಕವನ ಸಂಪಿಗೆ

ರಚನೆ : ಸುರೇಶ ಶಂಕ್ರೆಪ್ಪ ಅಂಗಡಿ

----------------------------------

ಮನವು ಮಲ್ಲಿಗೆ ಕವನ ಸಂಪಿಗೆ ಸುಂದರ ಭಾವ ಬೆಸುಗೆ ನೀ ನಡೆ ಮೆಲ್ಲಗೆ ನಡಗದಿರು ಚಳಿಗೆ ಮಾತುಗಳೇ ತರುವುದು ಬೆಚ್ಚಗೆ ಹೆದರದಿರು ಬಿಸಲಿಗೆ ಸೋಲದಿರು ಚಲುವಿಗೆ ನಲುಗದಿರು ನೋವು ಕಹಿಗೆ ಗಟ್ಟಿತನವ ಕಲಿಸುವುದು ಒಳತಿಗೆ ಮರುಳಾಗದಿರು ನಯವಂಚಕರ ಮಾತಿಗೆ ಆಗಿಂದಾಗೆ ತಿರ್ಮಾನ ನಿರ್ಣಿಯಿಸದಿರು ಬೇಗನೆ ಒಳ್ಳೆಯತನದವರು ಎಂದಿಗೂ ಕೇಡ ಬಯಸಲ್ವೆ ಸ್ವಚ್ಛ ಪರಿಸರವೇ ರಸಕಾವ್ಯ ಸವಿ ರುಚಿ ಜಗದೆಲ್ಲಡೆ ಜೀವಸಂಕುಲಗಳ ಹಸಿರು ವನ ಸಿರಿಯಲಿ ನಲಿವ ತಾಣವು ಮರುಗದಿರು ಸೊರಗದಿರು ನಿಂದಕರ ಕೊಂಕು ನುಡಿಗೆ ಮನವು ಮಲ್ಲಿಗೆ ಕವನ ಸಂಪಿಗೆ ಸುಂದರ ಭಾವ ಬೆಸುಗೆ

----------------------------------

ನೋಂದಣಿ ಐಡಿ : KPFS2-7965

1
Votes
168
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top