Submission 4262

ಜೀವನಪ್ರೀತಿ

ರಚನೆ : ಡಿ.ಶಬ್ರಿನಾ ಮಹಮದ್ ಅಲಿ

----------------------------------

ನಾವು ಮುಡಿಯುವ ಈ ಹೂವಿನ 'ಜೀವನಪ್ರೀತಿ' ಅದೆಷ್ಟು ಚೆಂದ‌ ನೋಡು ಗೆಳತಿ, ಮುಂಜಾವಿನ‌‌ ನಸುಕಲಿ ಅರಳಿ ಇಳಿಸಂಜೆಯಲಿ ಬಾಡಿ ನೆಲತಬ್ಬುವುದು! ಆದರೂ,ದಿನದ ತನ್ನ ಆಯಸ್ಸಿನಲಿ ಅದು ನಮ್ಮಂತೆ ಎಂದೂ ಕೊರಗದು,ಮರುಗದು! ಹಾಗಾದರೆ ಈ ಹೂವಿಗೆ ದುಃಖ ದುಮ್ಮಾನಗಳಿಲ್ಲವೇ, ಇಲ್ಲ ಅಂದವರು ಯಾರು? ಅರಳಿ ನಗುವ ಅದನು ಕೈಯಿಂದ ಚಿವುಟಿದವರೆಷ್ಟು, ಹರಿತವಾದ ಆಯುಧಗಳಿಂದ ಕೊಯ್ದವರೆಷ್ಟು, ಕಿತ್ತರೂ,ಕೊಯ್ದರೂ ದಾರದಿ ತನ್ನನು ಬಿಗಿದರೂ ಒಳಗಿನ ಜೀವನಪ್ರೀತಿಯಿಂದ ನಗುವುದಿಲ್ಲವ ಹೇಳು, ನಾವಿನ್ನು ಮನುಜರು, ಸಾಲು ವಸಂತಗಳನು ತಳ್ಳಬೇಕಾದವರು! ಬಂದ ಕಷ್ಟಗಳಿಗೆ ಗಾಯಕೆ ಮುಲಾಮಿನಂತೆ ಆ ಕ್ಷಣ ನೊಂದ ಮನಕೆ ಹಿಡಿಪ್ರೀತಿಯ ತಾಕಿಸಿ ಮಗುವಂತೆ ಸಂತೈಸಿ ಬದುಕ ಸಂಭ್ರಮಿಸಿಬಿಡು ಗೆಳತಿ, ನಾವು ಮುಡಿಯುವ ಈ ಹೂವಿನಂತೆ!

----------------------------------

ನೋಂದಣಿ ಐಡಿ : KPFS2-7960

1
Votes
142
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top