ಅನ್ನದಾತ
ರಚನೆ : ಮಹದೇವಯ್ಯ ಎಸ್ ಎಸ್
----------------------------------
ದೇಶಕ್ಕೆ ಅನ್ನ ನೀಡುವ ರೈತ ನಮ್ಮೆಲ್ಲರ ಅನ್ನದಾತ ಹಗಲು ಇರುಳು ದುಡಿಯುವನು ಹರಿದ ಬಟ್ಟೆಯಲ್ಲಿ ಬದುಕು ಮನೆಯವರ ಖುಷಿಗಾಗಿ ದುಡಿಯುವನು ನಮ್ಮ ರೈತ ಮಳೆಯಲ್ಲಿ ನೆನೆದು ಬಿಸಿಯ ಉಸಿರಲ್ಲಿ ಬಿಸಿಲಲ್ಲಿ ಒಣಗಿ ಹಸಿದ ಹೊಟ್ಟೆಯಲ್ಲಿ ನಗುನಗುತ ಬದುಕಿನ ಬಂಡಿಯೊಂದಿಗೆ ಕಸಿಯ ಮಾಡಿ ಖುಷಿ ಪಡುವನು ಸಾಲದ ಸೂಲದಲ್ಲಿ ಸಿಲುಕಿ ಸಾಲಗಾರನೇ ಹೊರತು ಮೋಸಗಾರನಲ್ಲ ಅನ್ನ ನೀಡುವ ಆಶ್ರಯದಾತನನ್ನು ಬೇಸರಗೊಳಿಸದೆ ಸಹಕಾರ ನೀಡಬೇಕು ಇಂದಿನ ಸರ್ಕಾರ
----------------------------------
ನೋಂದಣಿ ಐಡಿ : KPFS2-7943