Submission 4232

ಅಂತಿಮ ಸ್ವಗತ

ರಚನೆ : ಮಮತಾ ಶ್ರೀಧರ್

----------------------------------

ಒಂದಿಷ್ಟು ಸೂರ್ಯೋದಯಗಳ ನೋಡಲಿಕಿತ್ತು ಚಂದಿರನ ಬೆಳದಿಂಗಳ ಕಣ್ತುಂಬಿಕೊಳಲಿಕ್ಕಿತ್ತು ಲೆಕ್ಕವಿಲ್ಲದಷ್ಟು ಕತೆಗಳ ಓದಲಿಕ್ಕಿತ್ತು ಈ ಕಂಗಳಿಗೆ ಅದೆಷ್ಟೋ ಕನಸುಗಳಿತ್ತು ನನಸಾಗದ ಕನಸುಗಳನೇ ತುಂಬಿಕೊಂಡು ಬಾಗಿಲು ಮುಚ್ಚಲಾಗದ ಪೆಟ್ಟಿಗೆಯಾದ ಕಂಗಳು ಕುಕ್ಕುವ ಬೆಳಕಿಗೆ ಎಲ್ಲವನೂ ದೂಡಿ ಕತ್ತಲೆಯ ತಬ್ಬಲು ಹವಣಿಸುತಿವೆ ರೆಪ್ಪೆಗಳು ಎಂದಾದರೊಂದು ದಿನ ಸಿಕ್ಕರೂ ಸಿಗಬಹುದಾದ ನೆಮ್ಮದಿಯ ಕಡೆಗಣಿಸಿ ಎಲ್ಲ ಕೊನೆಯಾದ ಮೇಲೆ ಏನುಳಿಯಬಹುದೆಂಬ ಕುತೂಹಲವ ಪರಿಗಣಿಸಿ ಒಂದಿನಿತು ಪ್ರೀತಿ, ಮೊಗೆದಷ್ಟು ಮಾನಸಿಕತೆ ಕೊಟ್ಟ ಜಗಕೆ ಕಂಬನಿಯ ವಿದಾಯ ಹೇಳುತ ಮೆಲುವಾಗಿ ಚಿರನಿದ್ದೆಗೆ ಜಾರುತಿರುವ ಕಂಗಳ 'ಅಂತಿಮ ಸ್ವಗತ'

----------------------------------

ನೋಂದಣಿ ಐಡಿ : KPFS2-7939

3
Votes
134
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top