ನೀನು ನಗಬೇಡ
ರಚನೆ : ಶೆಟ್ಟೆಪ್ಪ ಆರ್ ಬಿ
----------------------------------
ಹೇ ನನ್ನ ನೋಡಿ ನಗಬೇಡ ನೀನು ನೀನು ನಕ್ಕರೆ ನಿನ್ನ ನಗೆಯ ಕದ್ದು ಬಚಿಡುವೆ ಕಳ್ಳ ಬೆಕ್ಕಿನ ಹಾಗೆ ಕಾಯುವೆ ನಿನ್ನ ನಗೆಯ ದೋಚಲು ಕದ್ದು ಮುಚ್ಚಿ ಸೂಸುಗಾಳಿಯ ಸೂಸುವೆ ನಿನ್ನ ನಗೆಯ ತೋರಲು ರವಿಕಿರಣವ ಕಳಿಸುವೆ ನಗಬೇಡ ನೀನು ನೀ ನಕ್ಕರೆ ಬೆಳದಿಂಗಳು ಬೆರಗಾದಿತು ಹೂವಿಗೂ ನಗೆ ಮರೆತಿತು ನಿನ್ನ ನಗೆಯ ಕಂಡು ಕೋಗಿಲೆಯ ಕಂಠ ಬರಿದಾದೀತು ನವಿಲಿನ ರೆಕ್ಕೆಯು ಮುದುಡಿತು ಮಂದವಾದಿತು ನಕ್ಷತ್ರಗಳೆಲ್ಲ ನಿನ್ನ ನಗೆಯ ಚಲುವ ಕಂಡು ನಗಬೇಡ ನೀನು ನೀ ನಕ್ಕರೆ ನಾ ಕಾಣೆಯಾಗುವೆ, ಮರಳಿ ಬಾರದೆ ಭೂಮಿಗೆ
----------------------------------
ನೋಂದಣಿ ಐಡಿ : KPFS2-7926