Submission 4190

ಹೃದಯ ಭಾಷೆ ಕನ್ನಡ

ರಚನೆ : ಶ್ರೀನಿವಾಸ್ ಜಲವಾದಿ

----------------------------------

ಕನ್ನಡ ಕನ್ನಡ ಎದೆಯ ಬಾನಿನ ಕನ್ನಡ ಉಸಿರು ಕನ್ನಡ ನಡೆ ನುಡಿಯು ಕನ್ನಡ ಬದುಕು ಕನ್ನಡ ಬೇವು ಬವಣೆ ಕನ್ನಡ ಸಿರಿ ಸೌಂದರ್ಯ ಸವಿ ಜೇನಿನ ಕನ್ನಡ! ಬೆಳದಿಂಗಳ ಕಾಂತಿ ಕನ್ನಡಿಯ ಕನ್ನಡ ಕಾಲಜ್ಞಾನಿ ಕವಿಕಾವ್ಯದ ಹಬ್ಬ ಕನ್ನಡ ವಿಶ್ವಚೈತನ್ಯದ ಒಲವಿನ ಧಾರೆ ಕನ್ನಡ! ವಚನ ಅರಿವುರಾಶಿ ದಾಸರನುಡಿ ಕನ್ನಡ ಭಾವೈಕ್ಯತೆ ನಿಧಿ ತಿಂಥಣಿ 'ಮೌನ' ಕನ್ನಡ ಅಲ್ಲಮ ಬಸವ ಅಕ್ಕರ ಹೊಸತು ಕನ್ನಡ ಕನಕ ಪುರಂದರ ವ್ಯಾಸ ದಾಸರ ಕನ್ನಡ! ಜಗದ ಬೆಳಕಿನ ಕುವೆಂಪು ಬೇಂದ್ರೆ ಕನ್ನಡ ಕಗ್ಗವ ಜಗಕೆ ನೀಡಿದ ಡಿವಿಜಿ ಅಮರ್ಗನ್ನಡ ಕನಸಿನ ಭಾರತದ ಧ್ವಜದ ಪ್ರೀತಿಯ ಕನ್ನಡ ಇಬ್ಬನಿ ತಬ್ಬಿದ ಮಕರಂದ ಹೂವೇ ಕನ್ನಡ!

----------------------------------

ನೋಂದಣಿ ಐಡಿ : KPFS2-7909

1
Votes
124
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top