Submission 4150

ಜನುಮದಿನ

ರಚನೆ : ಮಡಪತಿ ಜ್ಯೋತಿ

----------------------------------

ನನ್ನ ಜನುಮದಿನವು ದಿನೇ ದಿನೇ ನಾನು ಸಾವಿಗೆ ಹತ್ತಿರವಾಗುತಿರುವೆನು ಎನ್ನುವ ಕಹಿ ಸತ್ಯವನ್ನು ನೆನಪಿಸುತ್ತಿರುತ್ತದೆ ಇಂದು ಹುಟ್ಟುಹಬ್ವವೆಂದು ಸಂಭ್ರಮಿಸಲೋ ಅಥವಾ ಸಾವು ಸಮೀಪಿಸುತಿದೆ ಎಂದು ದುಃಖಿಸಲೋ ಹುಟ್ಟಿನ ಬೆನ್ನಿಗೆ ಸಾವಿದೆ ಸಾವಿನ ಬೆನ್ನಿಗೆ ಹುಟ್ಟಿದೆ ಹೀಗೆ ಒಂದರ ಹಿಂದೆ ಒಂದು ಜಪಮಣಿಯಂತೆ ಪೋಣಿಸಿದೆ ಹುಟ್ಟುಸಾವುಗಳೆಂಬ ಜಪಮಾಲೆಯ ಕೊರಳಲ್ಲಿ ಧರಿಸಿ ಬಂದಿರುವೆ ಎಷ್ಟು ಬಾರಿ ತಿರುಗಿಸಿದರೂ ಮುಗಿಯದ ಜಪ ತೀರದ ತಪ ಈ ಹುಟ್ಟು ಸಾವುಗಳು ನಾ ತೊಟ್ಟ ದೇಹಕ್ಕೋ ನನ್ನೊಳಗಿನ ಆತ್ಮಕ್ಕೋ ಈ ದ್ವಂದ್ವತೆಯ ಭಾವ ಸದಾ ಕಾಡುತಿದೆ ಮನದಿ ಆತ್ಮವಾದರೆ ಅವಿನಾಶಿ ಅಸ್ತಿತ್ವವಾದರೆ ಚಿರಸ್ಥಾಯಿ ಮತ್ಯಾವುದು ಹುಟ್ಟು ಮತ್ಯಾವುದು ಸಾವು!!

----------------------------------

ನೋಂದಣಿ ಐಡಿ : KPFS2-7878

58
Votes
429
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top