ನನ್ನ ಕನ್ನಡ ನಾಡು
ರಚನೆ : ದೀಪಾ ರಾಮನಾಯ್ಕ್
----------------------------------
ಕನ್ನಡ- ಕನ್ನಡ ಎದೆಯಾಳದಲ್ಲೂ ಕನ್ನಡ ತಾಯಿಯೇ ನನ್ನ ಉಸಿರಿನಲ್ಲೂ ಸ್ವಚ್ಛ- ಸುಗಂಧದ ಭಾಷೆ ನನ್ನದು ಸಾಧ್ಯವಿಹುದೇ ಇದ ನಾ ಮರೆಯುವುದು ಈ ನಾಡ ನೆಲ,ಜಲ,ಹಸಿರು ಜೀವಿಸುವ ಒಬ್ಬೊಬ್ಬನಿಗೂ ಉಸಿರು ತೀರದು ಎಂದಿಗೂ ಇದರ ಋಣ ಸ್ವತಃ ಭಗವಂತನೇ ಬಂದರೂ ಬಾಯಿಯಿಂದ ಬಂದ ಅಮ್ಮ ಕನ್ನಡ ಬೀಳಲು ಬಿಡಲಾರೆ ಇದಕ್ಕಾವುದೇ ಬಗ್ಗಡ ಕನ್ನಡ ತಾಯಿ ಇರುವಳೆಂದೂ ನನ್ನ ಸಂಗಡ ದೇಹದ ಕಣ-ಕಣದಲ್ಲೂ ನನ್ಕ ಕನ್ನಡ ನನ್ನ ಕನ್ನಡ ನಾಡು, ನನ್ನ ಬೀಡು ಇದುವೇ ನನ್ನ ಸುಂದರ ಗೂಡು
----------------------------------
ನೋಂದಣಿ ಐಡಿ : KPFS2-7860