ಕೆಂಡದ ಕಿಡಿಗಳು
ರಚನೆ : ರಾಜರತ್ನ
----------------------------------
ಒಬ್ಬಳೇ ತಾಯಿಯು ನಮಗೂ ನಿಮಗೂ, ಕನ್ನಡ ತಾಯಿಯ ಸುಂದರ ಬೆಡಗು, ನೋಡುತ ಬಾಳಿರಿ ಇಲ್ಲಿದೆ ಸೊಬಗು, ಇಲ್ಲದರಿಲ್ಲ ನಮಗಿದೆ ಕೊರಗು. ಬೂದಿಲಿ ಮುಚ್ಚಿದ ಕೆಂಡದ ಕಿಡಿಗಳು, ಭುಗಿಲೆದ್ದು ಮೇಲೆರಗುವ ಮುನ್ನ, ಎಚ್ಚೆತ್ತುಬರೆ ಬದಲಾವಣೆಯನ್ನ.... ಇಲ್ಲದರಿಲ್ಲ ಮುಂದಿನ ಅನ್ನ. ನಮಗೂ ಮುಂದಿನ ಜೀವನ ಬೇಕು, ನಿಮ್ಮಯ ಹಾಗೆಯೇ ನಮ್ಮಯ ಬದುಕು, ಬದುಕುವ ಹಕ್ಕಿದೆ ನಮಗೂ ನಿಮಗೂ.. ತಾಯಿಯ ಋಣವಿದೆ ಸಾಯುವವರೆಗೂ, ತೊರೆಯಿರಿ ಜೀವದ ಜಾತಿಯ ಬೇಡಿ, ಕೈಯ್ಯಲಿ ಹಿಡಿಯಿರಿ ಸಂಸ್ಕೃತಿ ನಾಡಿ.
----------------------------------
ನೋಂದಣಿ ಐಡಿ : KPFS2-7857