ನಮ್ಮ ನುಡಿ ಕನ್ನಡ
ರಚನೆ : ಡಾ. ಮಂಜುನಾಥ ಬಿ ಸಿ
----------------------------------
ಕನ್ನಡ ನನ್ನ ತಾಯಿಯ ನುಡಿ, ಮಧುರವಾದ ಮಾತಿನ ಹುಡಿ. ಅಕ್ಷರದಲಿ ಅಂಬರದ ಮೌನವಿದೆ, ಪದದಲಿ ಪ್ರೇಮದ ಪಾವನವಿದೆ. ಹೆಮ್ಮೆಯ ನಾದ ಅದು ಕನ್ನಡ, ಸಂಸ್ಕೃತಿಯ ಮೆರಗು ಅದರ ಮನ್ನಣ. ಕಾವ್ಯ, ಕಲೆ, ಕಥೆಯ ಅಲಂಕಾರ, ನಮ್ಮ ಮನದಲಿ ಕನ್ನಡದ ಧಾರ. ಪುಟಪುಟದಲಿ ಪಾಠದ ಬೆಳಕು, ಮನಮನದಲಿ ಮಾತಿನ ನೆನಪು. ನಮ್ಮ ಜೀವದ ನಾದ ಕನ್ನಡವೇ, ಭಾವದ ಬಣ್ಣ ತುಂಬುವ ನುಡಿಯೇ!
----------------------------------
ನೋಂದಣಿ ಐಡಿ : KPFS2-7834