Submission 4064

ನಲ್ಮೆಯ ಸಾಲ

ರಚನೆ : ಶಿವರಾಜ್ ಜೆ

----------------------------------

ಪ್ರತಿ ಬಾರಿಯೂ ನೀ ಕೇಳುವ ಭೌತಿಕ ಸಾಲ ಅನ್ಯ ಯಾರಿಗೋ ಎರವಲು ನೀಡುತ್ತಿರುವೆ ಎಂದು ಊಹಿಸಲಾರೆ ನಾ! ಬದಲಾಗಿ ನನ್ನಲ್ಲಿನ ಪ್ರೀತಿ, ಸ್ನೇಹವೇ ಸಾಲವಾಗಿ ಧಾರೆ ಎರೆಯುತ್ತಿರುವೆ ಎಂದು ಭಾಸವಾಗುತ್ತದೆ! ಹೆಚ್ಚೇನೂ ಕೇಳೆನೂ ಅಭಿರಾಮ ನಲ್ಲಿಗೆ ಭೌತಿಕ ಸಾಲ ಬೇಡುವ ಗೋಜಿಗೆ ಹೋಗಲಾರೆ ನಾ! ನಿನ್ನಲ್ಲಿನ ಪರಿಶುದ್ಧ ಪ್ರೀತಿ, ಸ್ನೇಹ, ನಂಬಿಕೆ ಕಾಳಜಿಯೊಂದೆ ಸಾಲವಾಗಿ ಧಾರೆ ಎರೆಯುವೆಯ ನನ್ನಇನಿಯ! ಆ ನಿನ್ನ ನಿರ್ಮಲ ನಲ್ಮೆಯ ಕಾಳಜಿಯಲ್ಲೆ ಜೀವ ‌ಸವೆಸುವಾಸೆ ಈ ಜೀವಕೆ

----------------------------------

ನೋಂದಣಿ ಐಡಿ : KPFS2-7820

3
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top