ಸ್ಫೂರ್ತಿ
ರಚನೆ : ಚೈತ್ರ . ಯನ್
----------------------------------
ನನ್ನ ಜೀವನದ ನೆರಳಾಗಿ ಬಂದೆ ಮನದಲ್ಲಿ ಹರುಷವ ತಂದೆ ಎಲ್ಲಾ ಕ್ಷಣದಲ್ಲೂ ಜೊತೆಯಾಗಿ ನಿಂದೆ ಜೀವನ ಸಾಗಿತು ಮುಂದೆ ಮುಂದೆ ಹುಣ್ಣಿಮೆಯ ಚಂದಿರ ನೀನ ಮೈ ಮರೆತೆ ನಿನ್ನ ಕಂಡು ನಾನು ಬೆಳಕಲ್ಲಿ ನನ್ನ ಜೊತೆಯಾದೆ ಇರುಳಲ್ಲಿ ನಿನ್ನ ಕಾಣದಾದೆ ನೀ ಎನ್ನ ಜೀವನ ಸ್ಫೂರ್ತಿಯಾದೆ ಜನುಮಕ್ಕೂ ಬಿಡಿಸಲಾರದ ಬಂಧವಾದೆ ನನ್ನ ಜೀವನದ ಗುರು ನೀನು ನಿನ್ನ ಹಿಂಬಾಲಕನಾಗಿ ಬಂದೆ ನಾನು ಧೈರ್ಯ ತುಂಬು ಜೊತೆಯಾಗಿ ಹರುಷ ತುಂಬು ಹಿತವಾಗಿ.
----------------------------------
ನೋಂದಣಿ ಐಡಿ : KPFS2-7783