Submission 4002

ನವಿಲು ನನ್ನವಳು

ರಚನೆ : ಮಕರ ಚಂದನ್

----------------------------------

ನವರಂಗ ನಲುಮೆಯಲಿ, ನವಿಲಂತೆ ನಿಂತಿರುವೆ, ನಳಿನಾನನೆ ನೀನು ನನ್ನವಳು, ನೀ ನನ್ನವಳೆಂದೆಂದಿಗು, ನೀ ನನ್ನವಳೆಂದೆಂದಿಗು ನವರತ್ನದ ನಯನದಿಂದ, ನೀ ನನ್ನ ನಾಟಿದೆ, ನಿರಾಳವಾದ ನೆರಳಲ್ಲಿ ನಾ ನಿನ್ನ ನೆನೆಯುವೆ, ನೀ ನನ್ನವಳೆಂದೆಂದಿಗು,ನೀ ನನ್ನವಳೆಂದೆಂದಿಗು ನಾ ನಿನ್ನ ನೃಪನಾಗಿ, ನೀ ನನ್ನರಸಿಯಾಗಿ, ನಗುನಗುತ್ತಾ ನಲಿಯುತ್ತಾ ನಭದಲ್ಲಿ ನೆಲೆಯುವ, ನೀ ನನ್ನವಳೆಂದೆಂದಿಗು, ನೀ ನನ್ನವಳೆಂದೆಂದಿಗು ನಾಲ್ಕು ನಿಮಿಷಕ್ಕೊಮ್ಮೆ ನಾ ನನ್ನ ನೆನೆಯದೆ, ನನ್ನಲ್ಲಿ ನಿನ್ನನ್ನ ನಾ ನೋಡಿದೆ, ನವಿಲೇ. ನೀ ನನ್ನವಳೆಂದೆಂದಿಗು,ನೀ ನನ್ನವಳೆಂದೆಂದಿಗು

----------------------------------

ನೋಂದಣಿ ಐಡಿ : KPFS2-7767

1
Votes
133
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top