Submission 3998

ನನ್ನ ಕವನ

ರಚನೆ : ಹಣಮಪ್ಪ ಪುರ್ತಗೇರಿ

----------------------------------

ಗುಡಿಸಲಿನಲ್ಲಿ ಅರಳಿದ ಗುಲಾಬಿ ನನ್ನ ಕವನ ಅವಳಿಗಾಗಿ ಮಿಸಲಿರುವದು ನನ್ನ ಈ ಜೀವನ ಮರುಳುಗಾಡಿನ ಮಣ್ಣು ನಾನು ಎದೆಗೆ ಪ್ರೀತಿಯ ಹನಿ ಬಿಟ್ಟು ಹಸಿರಾದದ್ದು! ಹಸುರಾಗಿ ಚಿಗುರಾಗಿ ತೆನೆಯಾಗಿ ನಿಂತದ್ದು! ಅವಳಿಂದಲ್ಲವೇನು, ಅವಳನ್ನು ಹೇಗೆ ಮರೆಯಲಿ ನಾನು ನಗೆಯಲ್ಲೆ ನಾಚಿಸಿ, ನಡಿಗೆಯಲ್ಲೇ ನರ್ತಿಸಿ ಕಣ್ಣಲ್ಲಿ ಪ್ರೀತಿಸಿ,ಕನಸಲ್ಲೆ ಕನವರಿಸಿ ನನ್ನ ಹೃದಯ ಕದ್ದ ಚೋರಿಯಲ್ಲವೇನು.. ಅವಳನ್ನು ಹೇಗೆ ಮರೆಯಲಿ ನಾನು. ಕನಸು ಚಿಕ್ಕದವಳದ್ದು ಮನಸು ಮಾತ್ರ ಅಂಬರದ್ದು, ಬಿಚ್ಚಿ ಹೇಳದ ಬುದ್ದಿ ಅವಳದ್ದು.... ನನ್ನ ಈ ಮಾತಿಲ್ಲದ ಪ್ರೀತಿಗೆ ಕೊನೆಯಿಲ್ಲವೇನು, ಅವಳನ್ನು ಹೇಗೆ ಮರೆಯಲಿ ನಾನು

----------------------------------

ನೋಂದಣಿ ಐಡಿ : KPFS2-7765

18
Votes
242
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top