Submission 3994

ಭಂಡ ಜೀವನ

ರಚನೆ : ಗೋವಿಂದೇಗೌಡ ಎ ಎಸ್

----------------------------------

ನದಿ ಹರಿಯುವಾಗ ಏನೇನು ಇಳಿಜಾರು ಏನೆಲ್ಲಾ ಎಡರು ತೊಡರು, ನೋವು ಎಂದರೆ ಸಾಗರ ಸೇರುವುದು ಹೇಗೆ, ಜೀವನ ಎಂದರೂ ಹೀಗೆನಾ.! ಇದ್ದಾಗ ಏನೆಲ್ಲಾ ಗೋಳು ಗೋಜಲು ಗಲಭೆ ಕಥೆ ವ್ಯಥೆ ಆದರೆ ಹೋದಾಗ ಮಹಾಮೌನ, ಅಳು ಉತ್ಸಾಹ ಮತ್ತು ಮೆರವಣಿಗೆ ಕಾಣಿಸುವುದೇ ಶವದ ಕಂಗಳಿಗೆ.! ಇರಲಿ, ಈ ಗೋಜಲಿಗೆ ಒಂದು ವ್ಯಾಖ್ಯಾನ ಬೇಕೆಂದು ಹೊರಟಾಗ ಸರಿ ತಪ್ಪು ಭಾವನೆಗಳು ಗಿರಕಿ ಹೊಡೆಯುತ್ತಾ ಕೊನೆಗೆ ಜೀವನವೇ ಒಂದು ಭ್ರಮೆ ಎನಿಸುತ್ತದೆ.! ವಯಸ್ಸಿಗೆ ತಕ್ಕಂತೆ ಆಗದಿದ್ದರೆ ಎಲ್ಲವೂ ತಿರುವು ಮುರುವು, ಅಂದುಕೊಂಡಂತೆ ಬದುಕಲಾಗದೆ ಯಾರಿಗೆ ಬೇಕು ಈ ಭಂಡ ಜೀವನ ಎನಿಸಿದರೆ ಇಷ್ಟು ಸಮಯ ಸವೆಸಿದ್ದು ಏನರ್ಥವಿದೆ.! ಸುರಿಯುವ ರಭಸದ ಮಳೆಗೆ ಹನಿಬೀಳುವ ಜಾಗೆ ತೂತು ಬೀಳುವುದು, ಮಣ್ಣು ಚದುರುವುದು, ಜೀವನದಂತೆಯೇ!

----------------------------------

ನೋಂದಣಿ ಐಡಿ : KPFS2-7763

0
Votes
216
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top