Submission 3972

ಬಿಡುವೆಲ್ಲಿದೆ ನಮಗೆ ?

ರಚನೆ : ಸತ್ಯವತಿ ಮೂರ್ತಿ

----------------------------------

ಯಂತ್ರಗಳ ಗಡಗಡಾಟ ಸ್ವಿಚ್ಚುಗಳ ಪಟಪಟಾಟ ವಾಹನಗಳ ಗುಡುಗಾಟ ʼಏಐʼ ನ ತಿಣುಕಾಟದಲಿ ತಳವಿಲ್ಲದೀ ಚೀಲ ಗೇಣುದ್ದ ಹೊಟ್ಟೆ ಲಂಪಟನ ಉಸಿರುಕಟ್ಟಿದ ದುಡಿತದಿ ತುಂಬುವ ಹಪಹಪದಲಿ ಬೆಳಕಿನಿಂದಿರುಳನಕ ದಿನನಿತ್ಯ ದುಡಿಯುವ ನಮಗೆ ನಮ್ಮ ಭವಿಷ್ಯವ ಕುರಿತು ಚಿಂತಿಸಲು ಬಿಡುವೆಲ್ಲಿ? ಪರರ ಹುಳುಕನಾರಿಸಿ ರವಷ್ಟೂ ಬಿಡದೆ ಶುದ್ಧಗೈಯುವ ನಿರಂತರ ʼಕಾಯಕವʼ ಕೈಕೊಂಡ ನಮಲ್ಲಿ, ಶ್ರಮಜೀವಿಯಲ್ಲಿ ಬಸವಣ್ಣನವರ ಕಾಯಕದರ್ಥವ ನಿಜವಾಗಿಸೆ ನಡೆಯುತ್ತ ಇಂದಿನ ಈ ಹೊತ್ತಿನ ಚಿಂತೆಯಲೇ ಮೈಮರೆತ ನಮ್ಮಲ್ಲಿ ತಲೆ ತುರಿಸಿಕೊಳ್ಳಲೂ ಆಗದೆ ನರೆಸಿಕೊಳ್ಳುವ ಜೀವನದಿ ನಮ್ಮದೇ ನಾಳೆಯ ಚಿಂತಿಸುವ ಬಿಡುವಿಗೆ ಬಿಡುವೆಲ್ಲಿ?

----------------------------------

ನೋಂದಣಿ ಐಡಿ : KPFS2-7744

1
Votes
114
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top