Submission 3968

ಡಿಜಿಟಲ್ ಮಾಯೆ

ರಚನೆ : ಆಕಸ್ಮಿತ ಪ್ರದೀಪ್

----------------------------------

​ಕೈಯಲ್ಲಿರುವ ಮೊಬೈಲ್ ಒಳಗೆ ಸೃಷ್ಟಿಯಾಗಿದೆ ಹೊಸ ಲೋಕ, ಬೆರಳ ತುದಿಯಲಿ ವಿಶ್ವ, ನಿಜ ಬದುಕಿಗೆ ಬಂದಿದೆ ಲೋಪ. ಹಸಿರು ಕಾಣದ ಕಣ್ಣುಗಳಿಗೆ ಈ 'ನೀಲಿ ಬೆಳಕೇ' ಆಸರೆ, ಕಿವಿಯಲಿ ಇಯರ್‌ಫೋನ್, ಮೌನದಿ ಮುಚ್ಚಿದೆ ಮನದ ಬಾಗಿಲು. ​ಸಂಬಂಧದ ಆಳ ಅಳೆಯದೆ 'ಲೈಕ್'ಗಳೇ ಬಹುಮಾನ, ನೆರೆಮನೆಯ ನೋವಿಗೂ 'ಸ್ಕ್ರಾಲ್' ಮಾಡಿ ಸಾಗುತಿದೆ ಮನ. ಕಳೆದುಕೊಂಡ ಕ್ಷಣಗಳೆಷ್ಟೋ, ಧ್ಯಾನವಿಲ್ಲದ ಪಯಣ, ಯಾಂತ್ರಿಕವಾಗಿ ಸಾಗುತಿದೆ ಯಂತ್ರದ ಬದುಕಿನ ವಾತಾವರಣ. ​ಹಳೆಯ ಹಾಡು ಮರೆತು, ಹೊಸ ನೋಟಿಫಿಕೇಷನ್ ರಾಗ, ಹೃದಯದ ಭಾಷೆ ಮಾಸಿ, ಎಮೋಜಿಗಳ ಸಂವಾದದ ಆಗರ. ಜೀವನದ ಸತ್ಯವ ಅರಿತು, ಬೇಲಿಯನು ದಾಟು, ಈ ಯಂತ್ರವನ್ನು ಗೆಲ್ಲಲು ನೀನು 'ಹ್ಯೂಮನ್ ಟಚ್' ಕೊಡಲು. ​ಈ ಡಿಜಿಟಲ್ ಗುಲಾಮಗಿರಿಯಿಂದ ನೀನು ಹೊರ ಬರಲೇ ಬೇಕು, ಎದ್ದು ನಿಲ್ಲು, ಜಗವ ನೋಡು, ಈಗಲೇ ಮೊದಲು,ಬದುಕಲು!

----------------------------------

ನೋಂದಣಿ ಐಡಿ : KPFS2-7737

1
Votes
107
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top