ಅಮ್ಮ (ಅ ಇಂದ ಅಂ )
ರಚನೆ : ಭಾರ್ಗವಿ ವರ್ಧನ್
----------------------------------
ಅಮ್ಮನ ಮಮತೆಯ ಆಲಿಂಗನದ ಸವಿಯು ಕಳೆದಿತ್ತು ಇರುಳಿನ ಕತ್ತಲೆಯ ಭಯವನ್ನು ಈಕೆಯ ಮಮತೆಗೆ ಯಾವುದಿದೆ ಸರಿಸಾಟಿ ಉರುಳಿ ಹೋಗಿದೆ ನನ್ನ ಬಾಲ್ಯ, ಆದರೂ ಊರುಗೋಲು ನನಗೆ ಅವಳ ಅಭಯ ಋಣಿ ನಾನು ಅವಳ ಪ್ರೀತಿಗೆ,ತ್ಯಾಗಕೆ ಎಣಿಸಲಾಗದು ಅವಳ ಸಿಹಿಮುತ್ತು ಆ ಕೈ ತುತ್ತು ಏನೇ ಸಿಕ್ಕರೂ ಅದಕ್ಕಿಲ್ಲ ಯಾವುದೇ ಕೀಮತ್ತು ಐಶ್ವರ್ಯ ಎಂದರೆ ಅವಳೇ ಒಡನಾಡಿಯೂ ಅವಳೇ,ಆ ಪ್ರೀತಿಯ ಓಕುಳಿಯಲ್ಲಿ ಮಿಂದೆ ನಾನು, ಅವಳ ಔದಾರ್ಯತೆಯಲ್ಲಿ ಬೆಳೆದೆ ನಾನು, ಅವಳ ಒಂದು ಅಂಶವೇ ನಾನು
----------------------------------
ನೋಂದಣಿ ಐಡಿ : KPFS2-7720