ಅವಳೆಂಬ ಅಧ್ಬುತ
ರಚನೆ : ಕಲ್ಪನಾ ಎಂ ಎಸ್
----------------------------------
ಮರೆಯಲಾರೆ ಮನವೇ ಮಮತೆಯ ಕಾಣಿಕೆ ಮತ್ತೆ ಬಂದುಬಿಡು ಇಹಕೆ ಬಿಟ್ಟುಕೊಡಲಾರೆ ನಿನ್ನ ಕ್ಷಣಮಾತ್ರಕೆ ವಿಧಿಯೇ ನೀ ನನಗೇಕೆ ನೀಡಲಿಲ್ಲ ಚೇತರಿಕೆ ಅವಳಿಲ್ಲದ ನಮ್ಮ ನಾಳೆ ಮರೀಚಿಕೆ ಸದಾ ನಿನ್ನ ಮುಗ್ಧತೆಯ ಸವಿಯುವ ಬಾಯಾರಿಕೆ ಪ್ರತಿದಿನವೂ ನಿನ್ನದೇ ನೇವರಿಕೆ ಕಂಗಳಿಗೆ ನಿನ್ನನೇ ಕಾಣಬೇಕೆಂಬ ಚಡಪಡಿಕೆ ಕೈಕಟ್ಟಿ ಕೂತ ನಮ್ಮದು ಬರಿ ಬೂಟಾಟಿಕೆ ಮರಳಿ ಕೊಟ್ಟುಬಿಡು ಅವಳ ವಿಧಿಯೇ ಅದುವೇ ನಮಗೆ ಕಾಣಿಕೆ
----------------------------------
ನೋಂದಣಿ ಐಡಿ : KPFS2-7648