ದೀಪಾವಳಿ
ರಚನೆ : ಗಿರೀಶ್ ಮೂಗ್ತಿಹಳ್ಳಿ
----------------------------------
ಕತ್ತಲೆಯಾಗಸ ಅಲಂಕಾರಗೊಂಡು ಗಾಳಿಯ ಕುತ್ತಿಗೆ ಹಿಚುಕುತಲಿತ್ತು! ಅರೆಸತ್ತ ಗಾಳಿಯು ಬಿಕ್ಕಳಿಸಿ ಬಂದು ಎದೆಯಾ ಗೂಡಲಿ ನರಳುತಲಿತ್ತು! ಹಕ್ಕಿ ಪಕ್ಕಿ ಮರಿ ಗಿರಿಗಳೆಲ್ಲಾ ಚದುರಿ ಹೋಗಾವೊ; ಬೆದರಿ ನಿಂತಾವೋ! ಮಿಣುಕು ತುಣುಕು ಸೆಣಕು ಹುಳುಗಳೆಲ್ಲ ಸೆಣಸಿ ಸೋತಾವೊ; ಸೋತು ಸತ್ತಾವೋ! ಅಂತಸ್ತಿನ ಅಧಿಕಾರ ಗದ್ದುಗೆ ಏರಿ ಪಟಾಕಿಗಳೆಲ್ಲ ಜಾಲಿ ಜಾಲಿ! ಅಂತರಂಗದ ವಿವೇಕ ಜಿದ್ದಿಗೆ ಹಾರಿ ಹಣತೆಗಳೆಲ್ಲಾ ಲಾಲಿ ಲಾಲಿ! ಮಣ್ಣಿನ ಹಣತೆಗೆ ಕತ್ತಲೆ ಅಳತೆ; ಎದೆಯಾ ಹಣತೆಗೆ ಮನುಜನ ನಡತೆ!
----------------------------------
ನೋಂದಣಿ ಐಡಿ : KPFS2-7612