Submission 3796

ಕವಿತೆ

ರಚನೆ : ಸಂತೋಷ್ ಕುಮಾರ್ ಪಿ ಕಲಾಲ್

----------------------------------

ಕಾದಾಡುತ್ತ ಕವಿತೆ ಒಂದು ಹುಟ್ಟಿದೆ ಕವಿಯ ಕೆಣಕಿ ಪದವೊಂದು ಬಂದಿದೆ ನೊಂದ ಕವಿಗೆ ಬೆಂದ ಪದವೊಂದು ಸಿಕ್ಕಿದೆ ನೂರು ನೋವಿಗೂ ಒಂದೇ ಪದವೆಂದು ಎದರು ನಿಂತಿದೆ ಎಷ್ಟು ಪಾಲುಂಟು ಕವಿಗೆ ಕವಿತೆಯಲ್ಲಿ ಅಷ್ಟೇ ಪಾಲುಂಟು ಪದಕ್ಕೆ ಕವಿತೆಯಲ್ಲಿ ಬದುಕಿಗೆ ಬದುಕೇ ಪರಿಚಯ ಕವಿಯ ವಿಳಾಸಕ್ಕೆ ಕವಿತೆಯ ಪರಿಚಯ ಪಲಾಯನವಾದ ಪದಗಳಿಗೂ ಬಯಕೆ ಸಾಲ ಆಗಲು ಕವಿಗೆ ಆ ಪದಗಳೊಂದಿಗೆ ಸರಸ ವಿಲ್ಲ ಆದರೂ ಅವುಗಳೊಂದಿಗೂ ಇರಬಹುದು ಚೂರು ಪಾರು ಒಲವು ನೋವಿದೆ ಕವಿತೆಗೆ ಅಷ್ಟೇ ನೋವಿದೆ ಕವಿಗೆ ನೊಂದ ಕವಿಯ ಬೆಂದ ಪದವೇ ಕವಿತೆ

----------------------------------

ನೋಂದಣಿ ಐಡಿ : KPFS2-7608

11
Votes
199
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top