ನನ್ನ ಸಂಗಾತಿ
ರಚನೆ : ಶ್ರೀಕಾಂತ ಮಳೆಗಲ್,ಬಳ್ಳಾರಿ
----------------------------------
ಪ್ರೀತಿಯ ಭಾಷೆ ನೀನೆ ಮೌನದ ಮಾತು ! ನಿನ್ನದೇ ಸಂವತ್ಸರದ ಚೈತ್ರಮಾಸದ ಚಿಗುರೆಲೆಯ ಮುಂಜಾವಿನ ಕಿರು ಸನ್ನೆ !! ಹೊಸ ಮೈತ್ರಿಯ ನೆನಪಿಗೆ ವರುಷದ ಒಲವೂ ಬಂದಿದೆ ಮಮತೆಯ ಮಾತುಗಳು ಕಂಗಳ ಕನಸಿಗೆ ತೀರದ ಜನಪದ ನೀನು!! ಪ್ರೀತಿಯ ಪ್ರಣತಿ ನನ್ನ ಸಂಗಾತಿ ಏನಿದು ನಿನ್ನ ಭಾವನೆಯ ಸಲ್ಲಾಪ ? ಕನಸಿನ ಮುಗುಳು ನಗೆ ನೀನಲ್ಲವೆ !! ಬಹುದಿನದ ಆಲಾಪ ನನಗಾಗಿದೆ ಅದು ಗೊತ್ತು ? ಕಣ್ಮನದ ಸನ್ನೆ ಸಾಕಾಗಿದೆ ಬಂದು ಬಿಡು ತವರಿನಿಂದ ಬಹು ಬೇಗ.
----------------------------------
ನೋಂದಣಿ ಐಡಿ : KPFS2-7563