ಸ್ನೇಹ ಸಖಿ
ರಚನೆ : ಭಾವನ. ಕೆ
----------------------------------
ಸಂಜೆಯ ಚಂದ್ರನಲ್ಲಿಮಿನುಗುವ ನಕ್ಷತ್ರದಲ್ಲಿ ಅರಳುವ ಹೂವಿನಂತೆ ಹೊಳೆಯುವ ನಗು ನಿನ್ನದು!ನೋಡಿದರೆ ಸೋಲುವ ನಡೆದರೆಸೆಳೆಯುವ ಈಜುವ ಮೀನಿನಂತೆ ಬೆರೆಯುವ ಕಣ್ಣು ನಿನ್ನದು! ಕೆಟ್ಟವರಿಗೆ ಕ್ರೂರಿಯಂತೆ, ಒಳ್ಳೆಯವರಿಗೆ ಬೆಣ್ಣೆಯಂತೆಸ್ನೇಹಕ್ಕೆಮಿಡಿಯುವ ಹೃದಯದಂತೆ ಮಾತು ನಿನ್ನದು!ಹೇಳುವುದನ್ನು ಕೇಳದೆ ಇಷ್ಟಪಟ್ಟಿದ್ದನ್ನು ಬಿಡದೆಮುನಿಸಿ ಕೊಂಡುಕೂರುವಂತ ಹಠ ನಿನ್ನದು!ದುಃಖಿತರಿಗೆ ಜೊತೆಯಾಗಿ,ಅವರ ಸಂಕಟಕ್ಕೆಹೆಗಲಾಗಿ.ಅವರು ನಗುವಂತೆ ಮಾಡುವ ಒಲವುನಿನ್ನದು! ಕೇಳದೆ ಕೊಡುವ ಹೇಳದೆಅರ್ಥೈಸಿಕೊಳ್ಳುವ ಸ್ವಚ್ಛ ಮನಸ್ಸಿನ ಅಚ್ಚ ಸ್ನೇಹ ನಿನ್ನದು!
----------------------------------
ನೋಂದಣಿ ಐಡಿ : KPFS2-7535