Submission 3692

ಹೆನ್ನಾದಾರೇನು ?

ರಚನೆ : ಧನುಷ್ ಎಂ

----------------------------------

ಮಾತಾಡೋ ಮೌನವನು ಮೌನಿಯಾಗಿಸು ಮೌನದ ಮಾತನ್ನು ಬಂಧಿಯಾಗಿಸು ಬಂಧನದ ಬದುಕಿದು, ಮುಕ್ತಿಗೊಳಿಸು ಹೆಣ್ಣಾದರೇನು?ಒಮ್ಮೆಯಾದರೂ ರೆಕ್ಕೆಯ ಬಡಿಸು ಓ ಸೃಷ್ಟಿಕರ್ತನೇ,ಹಾರುವುದಾದರೂ ಕಲಿಸು ಅಥವಾ ಉಸಿರನ್ನಾದರೂ ನಿಲ್ಲಿಸು... ಗಂಗೆಯಾದೆ,ಸಮಾಜದ ದಾಹ ತೀರಿಸಲಾದೆ ಲಕ್ಷ್ಮಿಯಾದೆ,ವರದಕ್ಷಿಣೆ ಗುಹೆಯಲಿ ಬೆಚ್ಚಿಬಿದ್ದೆ ಸರಸ್ವತಿಯಾದೆ,ಅಕ್ಷರ ಕಲಿಯಲು ಕೈಚಾಚಿದೆ ಭೂಮಿಜಳಾದೆ,ಕುಟುಂಬದ ದೌರ್ಜನ್ಯದಲಿ ಮಣ್ಣಾದೆ... ಕಣ್ಣೊಳಗಿನ ಕನಸುಗಳ ಸೋಕುವಲ್ಲಿ ಸೋತುಹೊದೆ.. ಹೆಣ್ಣಾದರೇನು ??? ಹಾರಲು ಬಯಸಿದೆ...

----------------------------------

ನೋಂದಣಿ ಐಡಿ : KPFS2-7529

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top