Submission 3680

ಒಡೆದ ಪ್ರತಿಬಿಂಬ

ರಚನೆ : ರೋಲ್ಸನ್ ವಿಶ್ವಾಸ್ ಡಿ'ಸೋಜಾ

----------------------------------

ಬದುಕುತ್ತಿರುವೆ ಮಾನವ ನೀ ಈ ಜಗತ್ತೆಂಬ ರಂಗ ಭೂಮಿಯಲಿ, ಅಭಿನಯಿಸುತ್ತಿರುವರು ಎಲ್ಲರೂ ಈ ರಂಗಮಂಟಪದಲಿ, ಕೇಳುತ್ತಿಲ್ಲ ಯಾರು ಬಡವರ್ಗದವರ ಕಷ್ಟದ ಸದ್ದು, ಮಾನವೀಯತೆ ಎಂಬುದು ಪುಸ್ತಕದೊಳಗೆ ಬರೆದ ಒಂದು ಶುದ್ಧ ಮದ್ದು. ಓ ಸಮಾಜವೇ ನಿನ್ನ ಕನ್ನಡಿ ಒಡೆದಿದೆ, ನಿನ್ನ ಪ್ರತಿಬಿಂಬ ನಿನಗೆ ಗುರುತಿಸಲಾಗದೆ? ಬಾಲ್ಯದ ಕನಸುಗಳು ಕಸದ ಬುಟ್ಟಿಯಲ್ಲಿ ಸೇರಿವೆ, ಸಂಜೆ ಮನೆ ಸೇರುವ ಮುಗ್ಧ ಹೆಣ್ಣಿನ ಮನಸ್ಸು ಬೆದರಿದೆ. ಹೇಗೆ ಸಮಾಧಾನ ಪಡಿಸಲಿ ನಿನಗೆ ಓ ಭೂದೇವಿಯೇ? ನಿನ್ನ ಮಕ್ಕಳು ನಿನ್ನ ವಿರುದ್ಧವೇ ನಿಂತಿರಲು ಸಾಧ್ಯವೇ! ನಮ್ಮದೇ ಕೈಯಿಂದ ಈ ಭೂದೇವಿಯ ಬಲಿದಾನ, ಕಣ್ಣೀರ ಕಂಡರೂ ಎಚ್ಚರವಾಗದೇಕೆ ಈ ಮನುಜನ ಮಾನ! ಎಲ್ಲಾ ಕಣ್ಣೀರ ಹಾದಿಯಲ್ಲಿ ಕಂಡ ಒಂದೇ ಸತ್ಯವಿದು, ಮನುಜ ಏಳು ನಾಳೆಯ ದಾರಿ ನಮ್ಮಿಂದಲೇ ಶುರು

----------------------------------

ನೋಂದಣಿ ಐಡಿ : KPFS2-7518

64
Votes
456
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top