ನೆಮ್ಮದಿ
ರಚನೆ : ಪ್ರವೀಣ ಹೊಟ್ಟಿ
----------------------------------
ಅಂದವೆಂಬುವುದು ಶೂನ್ಯವಾಗಿರುವಾಗ ಚಂದದ ತೋಡಿಗೆಯ ತೊಟ್ಟು ಅಂದವ ಬಯಸಿದರೆ, ಅಂದದ ತೊಡಿಗೆಯ ತೊಟ್ಟ ಹಿಂದೆ ಇದ್ದ ನೊಂದ ಹೃದಯಗಳ ಎಷ್ಟೋ. ಮಂದಹಾಸದಿಂದ ಇದ್ದೊಡೆ ನೆಮ್ಮದಿಯೂ ದೊರಕುವುದಾದರೆ ಮಂದಹಾಸದ ಹಿಂದೆ ಇದ್ದ ನೆನೆದ ಕಣ್ಣುಗಳು ಎಷ್ಟೋ, ಕುಗಿದ ಮನಸುಗಳು ಎಷ್ಟೋ. ನೆಮ್ಮದಿ ಹುಡುಕುತ್ತ ದಾರಿ ಬದಲಿಸಿದ ಹೆಜ್ಜೆಗಳು ಎಷ್ಟೋ. ನೆಮ್ಮದಿ ತನ್ನೊಳಗಿದೆ ಎಂದು ಮರೆತ ಹೃದಯಗಳು ಎಷ್ಟೋ.. ಮರೆತ ಹೃದಯಗಳು ಎಷ್ಟೋ...
----------------------------------
ನೋಂದಣಿ ಐಡಿ : KPFS2-7511