Submission 3656

ಹುಡುಕಬೇಡಿ ನನ್ನಂತವಳ

ರಚನೆ : ಕವಿತಾ ಪಾಟೀಲ್

----------------------------------

ಹುಡುಕಬೇಡಿ ನನ್ನಂತವಳ ಮನದ‌ ತಲ್ಲಣಗಳನೆಲ್ಲ ಗಂಟುಕಟ್ಟಿ ಗರುಡಗಂಬದ‌ ಕೆಳಗೆ ನೆರಳಿಗೆ‌ ಕಾದು ನಿಂತವಳು ನಾನು ಸಿಕ್ಕ ನೆಲವ ಆಲಯದಂತೆ ಕಂಡು ಅಲೆಮಾರಿ‌ಗಳ ಆಸ್ಥಾನಕೆ ಒಡತಿಯಾದವಳು‌ ಕಬೀರನ ಮನೆಯಲ್ಲಿ ಕಪ್ಪುರದಂತೆ ಸುಟ್ಟು ಬೆಳಗೆದ್ದು ಹೂವಾಗಿ ನರಳಿದವಳು ಕಾರ್ಮೋಡಗಳ ಕತ್ತಲಿನಲ್ಲಿ ಕರಗಿಹೋದವಳಲ್ಲ ಕಿರುಬೆರಳ ಆಸೆಯನೂ ತೊರೆದು ಕಿತ್ತ ಹಾದಿಯಲಿ ಒಂಟಿ ನಡೆಯುತಿರುವವಳು ಮತ್ತೆಂದು ಹುಡುಕದಿರಿ ನನ್ನಂತವಳ, ಅಂಬೆಯಂತೆ ಕೊನೆ ಉಸಿರಿಗಾಗಿ ಹಪಹಪಸುತಿರುವವಳು ನಾನು

----------------------------------

ನೋಂದಣಿ ಐಡಿ : KPFS2-7496

0
Votes
115
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top