Submission 3638

ನನ್ನ ನೆಚ್ಚಿನ ಊರು

ರಚನೆ : ಅಶ್ವಿನಿ ಇಟಗಿ

----------------------------------

ಸಾವಿರಾರು ಜನರ ಒಂದು ಊರು ಎಷ್ಟೋ ಜನಗಳ ನೋವು ತುಂಬಿರುವ ಊರು ಎಷ್ಟೋ ಜನಗಳ ಸಂತೋಷ ತುಂಬಿರುವ ಊರು ಸಂತೋಷ ನೋವುಗಳ ನಡುವೆ ಸಂಭ್ರಮದ ಊರು ಇದುವೇ ನಮ್ಮ ಪ್ರೀತಿಯ ಊರು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಊರು ನದಿ ಕೆರೆಗಳು ತುಂಬಿ ಹರಿಯುತ್ತಿರುವ ಊರು ಹಕ್ಕಿ ಪಕ್ಷಿಗಳಿಗೆ ನೇರವಾಗಿರುವ ಊರು ದನ ಕರುಗಳಿಗೆ ಹಸಿರು ತುಂಬಿರುವ ಊರು ಇದುವೇ ನಮ್ಮ ಪ್ರೀತಿಯ ಊರು ಹತ್ತು ಹನ್ನೆರೆಡು ಗುಡಿ ಗೋಪುರಗಳು ಇರುವ ಊರು ಗುಡ್ಡ ಬೆಟ್ಟಗಳನ್ನು ಹೊಂದಿರುವ ಊರು ಹೊಲ,ಗದ್ದೆ, ತೋಟಗಳು ಕೂಡಿಕೊಂಡಿರುವ ಊರು ಮುಗ್ಧ ಮಕ್ಕಳ ಮನಸ್ಸನ್ನು ನಗಿಸುವ ಊರು ಇದುವೇ ನಮ್ಮ ಪ್ರೀತಿಯ ಊರು ಪ್ರೀತಿಸಿ ಬಂದವರನ್ನು ಒಗ್ಗೂಡಿಸುವ ಊರು ಪ್ರೀತಿಗಾಗಿ ಜೀವವನ್ನು ತ್ಯಾಗ ಮಾಡುವ ಊರು ಪ್ರೀತಿಯಿಂದ ನವ ಜೋಡಿಗೆ ಹಾರೈಸುವ ಊರು ಮುಗ್ಧ ಪ್ರೀತಿಗೆ ಚಿರ ಋಣಿಯಾಗಿರುವ ಊರು ಇದುವೇ ನಮ್ಮ ಪ್ರೀತಿಯ ಊರು

----------------------------------

ನೋಂದಣಿ ಐಡಿ : KPFS2-7484

1
Votes
211
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top