ವಶ
ರಚನೆ : ರವೀಂದ್ರ ಸಿಂಗ್ ಕೋಲಾರ
----------------------------------
ದಿನಗಳುರುಳುತಾವೆ ಯಾರ ಅನುಮತಿ ಕೇಳದೆ ಹೊತ್ತಿದ್ದೇ ದೀಪ ಬೆಳಕ ಹರಡುತ್ತೆ ಜಾಗ ನೋಡದೆ ಮುಗಿಲಿಗೆ ತೋರಣ ಕಟ್ಟಿವೆೆ ಸಾಲುಹಕ್ಕಿ ಜಾರದೆ ಚಡಪಡಿಕೆಯ ಮನಸಿಲ್ಲೇನನ್ನೋ ಬಯಸಿದೆ ಹರೆಯದ ಹೃದಯ ತಿಳಿಯದಿನ್ಯಾರಿಗೋ ಕಾದಿದೆ ಕುಡಿನೋಟಕೆ ಕರಗಿ ಅದೃಶ ಇಹಪರ ಮಾತು ಮೌನ ಹೊಸ ರೂಪತಾಳಿ ಶೃಂಗಾರ ಕಣ್ಮುಚ್ಚಿ ಕಂಡ ಕನಸೆಲ್ಲಾ ಪುಷ್ಪ ಮಂದಾರ ಚೆಲುವಿಗೆ ವಶವಾದ ಜೀವವೇಕೋ ಹಗುರ ವಸಂತ ಚಿಗುರಂತೆ ಪ್ರತಿ ಕ್ಷಣವೂ ಮಧುರ ಜಗದಗೊಡವೆ ದೂರ ಕಾಡುವ ನೆನಪೇ ಸನಿಹ ಶೂನ್ಯ ಭಾವದೊಳಗೆ ಅನುಮತಿ ಇಲ್ಲದ ವಿರಹ ಎದೆಗೋಡೇಲಿ ಅಸ್ಪಷ್ಟ ಅನೋನ್ಯ ಒಲವ ಬರಹ ನಿದಿರೆ ಮಾಸಿ ಸಿಹಿ ನೀರು ಸೇರಿದ ಸಾಗರ ತರಹ ಮೋಹಕೆ ವಶವಾಗಿ ಹಗಲಿಗೂ ನಕ್ಷತ್ರ ಸಮೂಹ
----------------------------------
ನೋಂದಣಿ ಐಡಿ : KPFS2-7469