ಕನಸಿನ ಕಣಿವೆಯಲಿ
ರಚನೆ : ಮಹಾದೇವಿ ಅಯ್ಯಪ್ಪನೋರ್
----------------------------------
ಬಣ್ಣ ಬಣ್ಣದ ಕನಸುಗಳನ್ನು ಕಾಣುತಿದ್ದ ವಯಸ್ಸು ಕಷ್ಟ, ನಷ್ಟಗಳ ಅರಿವಿಲ್ಲದ ಮನಸ್ಸು ಆ ಮನಸ್ಸಿಗೆ ಏನು ತಿಳಿದಿತ್ತು ತನ್ನ ಪಯಣ ಯಾವ ಕನಸಿನ ಮನೆಗೆಂದು...... ಅಪ್ಪನ ಪ್ರೀತಿಗಾಗಿ ಮಿಡಿಯುತಿತ್ತು ಅಮ್ಮನ ಮಮತೆಗಾಗಿ ಹಂಬಲಿಸುತಿತ್ತು ಹಾರೈಸುವ ಜೀವಗಳ ಪ್ರೀತಿಯನ್ನು ಬಯಸುತಿತ್ತು ಸಮಯ ಕಳೆದಂತೆ ಎಲ್ಲವು ಕಾಣದಾಯ್ತು..... ಅರಿಯದ ವಯಸ್ಸಿನಲ್ಲಿ ಜವಬ್ದಾರಿಗಳ ಹೊತ್ತಿತ್ತು ಕಲ್ಪನೆಯಲ್ಲೇ ನೂರೆಂಟು ಕನಸುಗಳನ್ನು ಕಂಡಿತ್ತು ಬದುಕೆ ಒಂದು ಕಲ್ಪನೆ ಅನ್ನುವುದು ಮರೆತಿತ್ತು ವಾಸ್ತವದ ಭರವಸೆಯ ಬದುಕು ಮಂಕಾಗಿ ನಿಂತಿತ್ತು.
----------------------------------
ನೋಂದಣಿ ಐಡಿ : KPFS2-7464