ನಾನು ಎಂಬುವ ಆತ್ಮ
ರಚನೆ : ಅದೃಶ್ ಪುರುಷೋತ್ತಮ ಭಟ್
----------------------------------
ಒಡಲು ಬಿಡಲು ಮುಗಿಲು ಅಳಲು ಸಪ್ಪೆಯಾಯಿತು ಜಗವು ಪ್ರಕೃತಿ ಮಾತೆ ಅಪ್ಪಿ ಹಿಡಿಯಲು ಐಕ್ಯವಾಯಿತು ಆತ್ಮವು ಜ್ಞಾನ ಮೆರೆಯಿತು, ಋಣ ಬಿಚ್ಚಿತು ಬಂಧವ, ಎಲ್ಲ ಕಳೆಯಿತು ಈ ದಿನ ನನ್ನದೆಂಬುದೆಲ್ಲ ಮುಗಿಯಿತು ಹಿಡಿದೊಯ್ಯಲು ಆಗದೆ ಪಾಪ ಪುಣ್ಯವ ಲೆಕ್ಕ ಹಾಕುವೆ ಮುಂದೆ ಹೋಗುವ ದಾರಿಗೆ
----------------------------------
ನೋಂದಣಿ ಐಡಿ : KPFS2-7459