Submission 3602

ಮೆರವಣಿಗೆ.. ಶಿವನೆಡೆಗೆ..

ರಚನೆ : ಡಾ. ಪೂರ್ಣಚಂದ್ರ ಎಸ್ ಪಿ

----------------------------------

ಹೃದಯದ ಮೇಲೆ ನೆನಪಿನ ಮಾಲೆ, ನಡೆದಿದೆ ಸುಂದರ ಮೆರವಣಿಗೆ ಕನಸಿನ ಭುಜದಿ ಹೇಳದೆ ವರದಿ ಸಾಗಿದೆ ಕಾಣದ ದಿಕ್ಕೆಡೆಗೆ. ಕೆಂಡದ ಅಡವಿ ಹೃದಯವೆ ಅರವಿ, ಕಲ್ಪನೆ ಧೂಪದ ಸಿಂಪಡಿಕೆ. ಕಂಗಳ ಕರದೊಳು ನೆನೆಯುವ ನೆನಪಿದು, ಕಾದಿರಬಹುದೇ ಅರ್ಚನೆಗೆ? ಕಾಣದ ಊರು ಸೇರಿದೆ ತೇರು. ಅಲ್ಲಿ ಇಲ್ಲವೆ ಯಾವ ದೇಗುಲವು. ಅದು ಕೇವಲ ಕಣ್ಣು ಮುಚ್ಚುವ ಮಣ್ಣು, ಶಿವನೇ ಇರುವ ಈ‌ ನೆಲವು. ಒಳಗಿನ ದುಗುಡ ಚಿಂತೆಯ ಒಡಲ ತ್ಯಜಿಸುತ, ಮನವಿದು ಸಾಗಿದೆ ಶಿವನೆಡೆಗೆ. ಭಾವವ ತುಂಬಿದ ಹೃದಯದ ಜೀವವ ಮಲಗಿಸಿ ನೆಮ್ಮದಿ ಮಡಿಲೊಳಗೆ.

----------------------------------

ನೋಂದಣಿ ಐಡಿ : KPFS2-7456

2
Votes
132
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top