Submission 3596

ಶೋಕ ದೆಸೆ

ರಚನೆ : ಸಿದ್ದೇಶ್ ಕೆ ಎ

----------------------------------

ಅನುದಿನ ನಿನ್ನ ನೆನಪು ನನ್ನೊಳಗೆ ಕಾಡುವ ಪ್ರಶ್ನೆಗಳು ಹಲವು ಜೊತೆಗೆ ನಿನ್ನ ಸ್ಪರ್ಶವು ಬೇಕು ನಿನ್ನ ಸನಿಹವು ಬೇಕು ನಿನ್ನ ಮರೆಯುವ ನೋವು ನನಗೆ ದೂರದೆ ಸಾಕು. ಮರಳಿ ನೀ ಬರಲಿ ಎಂಬ ಆಸೆ ಬೆಟ್ಟದಷ್ಟು, ಆದರೆ ಮತ್ತೆ ನನ್ನ ಹಳೆಯ ನಡೆಯೇ, ನಿನ್ನ ಶಾಂತ ಜೀವನ ಮತ್ತೆ ಕದಡಿ ನಿನಗೆ ನಾ ಅದೇ ರೂಪಗೆಟ್ಟ ಒಡೆದ ಕನ್ನಡಿ ನೀ ದೂರದರು ನಿನ್ನ ನೆನಪು ಇಂದಿಗೂ ಹಸಿ ಅದರಿನ ಕಹಿ ನನ್ನ ನುಂಗುವಷ್ಟೇ ಆರದ ಬಿಸಿ. ನೆನೆಯುವೆ ನಾ ಈ ನಮ್ಮ ಒಲವನ್ನ ನನ್ನೆದೆಯ ಉಸಿರೊಡೆದು ದೇಹ ತಣ್ಣಗಾಗಿ ಅಸ್ತಿತ್ವವೇ ಇರದ ಗುರುತಗೋವೆರೆಗೂ ಪಂಚಭೂತದೀ ಹಾಗೆ ಲೀನವಾಗಿ ಜಗ ಮರೆತು ಹೊಸ ಎಲೆ ಚಿಗುರುವರೆಗೂ.

----------------------------------

ನೋಂದಣಿ ಐಡಿ : KPFS2-7452

0
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top