Submission 3588

ತ್ಯಾಗದ ಹಣತೆ

ರಚನೆ : ಕೃಷ್ಣ ಡಿ ಚೆನ್ನೀಪುರ

----------------------------------

ಒಡಲ ಉರಿಯೊಂದು ಉರಿಯುತ್ತಲೇ ಇತ್ತು, ಎಣ್ಣೆ ಇಲ್ಲದ ಹಣತೆಯಂತೆ ಮಿಣ ಮಿಣನೆ, ಸೂರನೆರಳಿನ ಜೂಟಾಟದ ಜೊತೆಗೆ ತನ್ನ ಕರಳ ನೋವಿನ ಖಾಲಿ ಜೋಗುಳವ ತೂಗುತ್ತಲೆ! ಕೈಹಿಡಿದ ಪತಿರಾಯನ ಕರೆದುಕೊಂಡಿದ್ದ ಬೇಗನೆ ಯಮರಾಯ, ಅವನೊಲವ ಹಂಚಿ ಜನಿಸಿತಿಲ್ಲಿ ಅವನೋಲುವ ಒಂದೇ ಒಂದು ಮಗುವ, ನೋವನುಂಗಿ ಬದುಕಿದೆ ಆ ತಾಯಿ ಕಂದನ ನಗುವಿಗಾಗಿ, ತಾಯಿ ಕರುಳು ಬೇಡುತ್ತಲೆ ಇತ್ತು ಯಮನ ಕೊನೆಗು ಬಿಡಲೆ ಇಲ್ಲ ಯಮನು ಅವನ!, ಈಗ ಇರುವುದೊಂದೆ ಜೀವ ಆ ಮಹಾಮನೆಯ ಒಳಗೆ, ತನ್ನ ನೋವ ಕೇಳಲು ಬಾಯಿಕಿವಿಯಿಲ್ಲದ ಕಂಬ,ತೊಲ,ಹೆಂಚು,ಕಿಟಕಿ,ಬಾಗಿಲುಗಳಷ್ಟೇ ಇಲ್ಲಿ ಮಗ್ನರು, ನೆರೆಮನೆಯ ಕಲರವ ಕೇಳಿ ಉಮ್ಮಳಿಸಿ ಬರುತ್ತಿದೆ ದುಗುಢ, ಆದರೂ ಅವಳಾದಳು ವಸಂತ ಕೋಗಿಲೆಗೆ ಬೇಡದ ಹೃದಯ, ಏಕೆಂದರೆ ಅವಳೊಂದು ಹೆಣ್ಣು ನೋಡಿ?!!, ಬದುಕಿನುದ್ದಕ್ಕು ನಡೆದಳು ನೊಂದು ನೊಂದು, ನೋವಿನಲ್ಲೆ ಮಡಿದಳು ಅವಳು ಎಂದೆಂದು, ಹೆಣ್ಣು ಉರಿಯುವ ಹಣತೆಯಂತೆ ಬೆಳಕನೀಡ ಬಲ್ಲಳು, ಅವಳ ತ್ಯಾಗವಲ್ಲವೆ ಉರಿದ ಎಣ್ಣೆ ಬತ್ತಿ.

----------------------------------

ನೋಂದಣಿ ಐಡಿ : KPFS2-7447

316
Votes
1,909
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top