ಸಾವಿರ ಬಾರಿ ಸೋತವನು
ರಚನೆ : ವಿಕಾಸ್ ತಳಗವಾದಿ
----------------------------------
ನೆಪವೇಳಿ ಹೊರಟವಳಲ್ಲ, ನನಗಾಗಿ ಹೋದವಳು ಕಣ್ತೆರೆಸಿ ಕಣ್ಮುಚ್ಚಿದವಳು ಕಣ್ತೆರೆಯಲಿಲ್ಲವೇಕೆ ಕಣ್ತೆರೆದು ನೋಡು ನೀ ಒಮ್ಮೆಯಾದರೂ ಅವ್ವ, ನಿನ್ನ ಕಂದನ ನೋವಿನ ಅಂತರಾಳವ. ನೀನಿಲ್ಲದ ಬಾಳಿಗೆ ಬೆಳಕಾಗಿ ಬಂದವಳು ಭಾವನೆಗಳ ಜೊತೆ ಬೆರೆತು, ನನಗಾಗಿ ಕಾದವಳು ಅನಿವಾರ್ಯತೆಯ ಆಯ್ಕೆಯಲ್ಲಿ ನನ್ನನ್ನು ತೊರೆದವಳು ಅವಳ ಪ್ರೀತಿಯನ್ನು ಗೆಲ್ಲದ ಅನಾಮಿಕ ನಾನು. ಪ್ರಯತ್ನವೆಂಬ ಪಥದಲ್ಲಿ ಪರಿಸ್ಥಿತಿಯ ಯುದ್ಧವು ಪರಮಾದೇಶವಾಗಿ ಪ್ರವೇಶಿಸಿದ ಪರಿವಿಡಿಯಲ್ಲಿ ಪರರ ನುಡಿಯ ನೋವುಗಳು ನನ್ನೊಳಗೆ ರೆಕ್ಕೆ ಮುರಿದ ಪಕ್ಷಿಯು ನಾನು. ಒಂದು ಬಾರಿ ಗೆದ್ದವನಲ್ಲ ಸಾವಿರ ಬಾರಿ ಸೋತವನು
----------------------------------
ನೋಂದಣಿ ಐಡಿ : KPFS2-7422