Submission 3536

ಹೀಗೇ ಹುಟ್ಟಲಿಲ್ಲ ಕವಿತೆ

ರಚನೆ : ಆರ್. ಸುನೀಲ್,

----------------------------------

ಹೀಗೇ ಹುಟ್ಟಲಿಲ್ಲ ಕವಿತೆ ಅಲ್ಲಿ ನೋವಿತ್ತು ನಲಿವಿತ್ತು ದುಗುಡ ಕದಡಿ ಹರಡಿತ್ತು ಖುಷಿಯು ಇಣುಕಿತ್ತು ಹೀರಿತ್ತು ಸಾರ ಹಗುರವಾಗಿ ಮನದ ಭಾರ..! ಹಸಿರಿತ್ತು ಉಸಿರಿತ್ತು ತಲ್ಲಣ ತಳಮಳವಿತ್ತು ಕತ್ತಲೆಯು ಕವಿದಿತ್ತು ಒಂದು ಕಿರಣಕ್ಕೆ ಕಾಯ್ದಿತ್ತು ಅಂದಿತ್ತು ಕವಿತೆ ನಾ ಜೊತೆಗಾರ..! ಅದು ನೊಂದಿತ್ತು ಬೆಂದಿತ್ತು ಸಮಯ ಕೊಂದಿತ್ತು ಹದವಾಗಿ ನೆಂದಿತ್ತು ಮಿಂದಂತೆ ಮಣ್ಣು ನೀರ ಕವಿತೆ ಕುಂಬಾರ..! ಹೌದು ಹೀಗೇ ಹುಟ್ಟಲಿಲ್ಲ ಕವಿತೆ ಅದು ಕಾಡಿತ್ತು ಹಾಡಿತ್ತು ಬಾಡಿತ್ತು ಅರಳಿತ್ತು ಒಲವ ಶೃಂಗಾರ ಜನುಮ ಸಾಕಾರ ಅದು ಮನದ ಸಾಕ್ಷಾತ್ಕಾರ..!

----------------------------------

ನೋಂದಣಿ ಐಡಿ : KPFS2-7407

11
Votes
335
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top