Submission 3520

ಖಾಲಿ ಹೃದಯ

ರಚನೆ : ರಂಗರಾಜು

----------------------------------

ಬಾಲ್ಯದ ಹಗಲುಗಳೆಂದರೆ ಸ್ವಚ್ಛ ಆಗಸ ಗಾಳಿಯ ಕಂಪು ಹಕ್ಕಿಗಳ ಇಂಪು ಹೂಗಳ ಗಂಧ ಸೊಬಗಿನ ಚಂದ ಹಸನಾದ ಮನಸ್ಸು ಹೊಂಗೆಯ ನೆರಳು ಇರುಳುಗಳೆಂದರೆ ಜನನಿಬಿಡ ಹಿಂಬಾಲಿಸುತ್ತಿದ್ದ ಚಂದ್ರ ಬೆಳದಿಂಗಳ ಊಟ ತಂಗಾಳಿಯಲ್ಲಿ ಖುಷಿಯ ಓಡಾಟ ಆಯಾಸವಿಲ್ಲದ ಆನಂದ ಅಮ್ಮನ ಮಡಿಲು ಗಾಢ ಪ್ರೇಮ ಕಾಲಕ್ರಮೇಣ ಎಲ್ಲವೂ ಕಣ್ಮರೆ ಸ್ವಭಾವಜನ್ಯ ಖುಷಿಗೆ ವಂಚನೆ ಸದಾ ಕಳೆದುಕೊಳ್ಳುವ ಭೀತಿ ತುಂಬಿದ ರಸ್ತೆ ಮತ್ತು ಖಾಲಿ ಹೃದಯ

----------------------------------

ನೋಂದಣಿ ಐಡಿ : KPFS2-7393

0
Votes
107
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top