Submission 3490

ನನ್ನವ್ವ

ರಚನೆ : ಮೋಹನ್. ಎಲ್

----------------------------------

ಮುಂಜಾನೆ ಕೆಂಪಣ್ಣ ಏಳಕ್ಕು ಮುಂಚೆ ನಸುಹೊತ್ತು ಕಪ್ಪಣ್ಣ ಸರಿದೋಗೊ ಮುಂಚೆ ದ್ಯಾವ್ರವ್ನೆ ಅಂಥ ಎದ್ದೋಳ್ಹೆ ನನ್ನವ್ವ ಚೆನ್ನವ್ವ ಮನೆಯೊಡೆಯ ದನಿ ಕೂಗಕ್ಕು ಮುಂಚೆ ಸೀಮೆಹಾಸ ಕರ ಕರಿಯಕ್ಕು ಮುಂಚೆ ದ್ಯಾವ್ರವ್ನೆ ಅಂಥ ಮಾಡೋಳೆ ಕ್ಯಾಮೆ ಚೆಂದವ್ವ ದೊಡ್ಡೈಕ್ಳು ಬೀದಿ ಅಲ್ದು ಬರಕು ಮುಂಚೆ ಮನೆದೇವ್ರು ಗೆಯ್ದು ಗೂಡು ಸೇರಕ್ಕು ಮುಂಚೆ ದ್ಯಾವ್ರವ್ನೆ ಅಂಥ ಮಾಡೋಳೆ ಅಂಬಲಿ ಚಿನ್ನವ್ವ ಹಟ್ಟಿ ಒಲೆ ಬಿಸಿ ಆರಕ್ಕು ಮುಂಚೆ ಗಟ್ಟಿಮುದ್ದೆ ಉಪ್ಸಾರು ಹಳಸಕ್ಕು ಮುಂಚೆ ದ್ಯಾವ್ರವ್ನೆ ಅಂಥ ಉಂಡು ಮಲಗವ್ಳೆ ನನ್ನವ್ವ

----------------------------------

ನೋಂದಣಿ ಐಡಿ : KPFS2-7372

18
Votes
154
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top