Submission 3434

ಸ್ವರಾಕ್ಷರಗಳ ಕವಿತೆ

ರಚನೆ : ಶರಣ್. ಎಮ್

----------------------------------

ಅದ್ಭುತ ಸಾಲುಗಳ ಕವಿತೆಯು ಅರಳಿ ಆಕಸ್ಮಿಕ ಕನಸೊಂದು ಮನದಲಿ ತೇಲಿ ಇಂದ್ರಚಾಪದ ಬಣ್ಣಗಳ ನಗು ಮೂಡಿ ಈಶ್ವರನ ಹೂ ತೋಟದಲಿ ತೇಲಿ ಉಷೆಯ ಕಿರಣದಲ್ಲಿ ನಲಿಯುವ ಹೂವು ಊರ ತಿರುಗಿ ಬಂದು ನೆನಪಾದ ನೀನು ಋತುಗಳು ಕಳಿತ ಹಾಡಿದೆ ಮನವು ಎದೆಯಲಿ ಹೊಸ ಹೂವೊಂದು ಅರಳಿ ಐದು ಪದಗಳು ಸಾಲದು ಹೇಳಲು ನಿನಗೆ ಒಲವಿನ ಊಡುಗೊರೆಯೇ ಹೂ ತೋಟ ಓ ನಿನ್ನ ಪ್ರೀತಿಯಲ್ಲಿ ನನ್ನ ಮನವು ಔದಾರ್ಯ ಹೃದಯದ ಬೆಳಕು ಚೆಲ್ಲಿ ಅಂಗಳದಲ್ಲಿ ಹೂ ಒಂದು ನಗುತ್ತಿತ್ತು ಅಃ ! ಎಂಥ ಅಂದವೇ ನಿನ್ನ ನಗು

----------------------------------

ನೋಂದಣಿ ಐಡಿ : KPFS2-7336

34
Votes
326
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top