Submission 3410

ಕಲಿಕನ್ನಡ

ರಚನೆ : ಅಕ್ಷತಾ ಸಿ. ಎಂ.

----------------------------------

ಕನ್ನಡ ಕಲಿಯಿರಿ ಓ ಜನರೇ ಎಲ್ಲರೂ ನಿಮ್ಮ ಬಂಧು-ಬಾಂಧವರೇ ಕೈ ತುತ್ತು ಕೊಡುವಳು ಹೆತ್ತಮ್ಮ ಜೀವನ ಸಾಗಿಸಲು ನೆರವಾಗಿರುವಳು ಕನ್ನಡಮ್ಮ ಆದರೂ ಏಕೆ ತೋರುವಿರಿ ಅಸಡ್ಡೆ ಸೋಮಾರಿತನ ಭಾಷೆ ಕಲಿತಾದರೂ ತೀರಿಸಿ ಇಲ್ಲಿನ ಋಣ ಎತ್ತ ನೋಡಿದರೂ ಆಂಗ್ಲ ಭಾಷೆಯ ಕಲರವ ಹೇಗೆ ಸಿಗುವುದು ಕನ್ನಡಕ್ಕೆ ಗೌರವ ನಿಮಗೆ ಬೇಕಿದೆ ಕನ್ನಡದ ನೆಲ, ಜಲ,ಧನ, ಧಾನ್ಯ ಆದರೆ ಕನ್ನಡ ಭಾಷೆಗೆ ಏಕೆ ಕೊಡುತಿಲ್ಲ ಮಾನ್ಯ ಕನ್ನಡಿಗರಿಗೆ ಎಲ್ಲ ಭಾಷೆಯು ಸುಲಭ ಸರಳ ಅನ್ಯಭಾಷಿಗರಿಗೆ ಕನ್ನಡದ ಒಲವು ವಿರಳ ಇನ್ನಾದರೂ ಕೊಡಿ ಕನ್ನಡಕ್ಕೆ ಸಹಕಾರ ಇಂದೇ ಶುರುವಾಗಲಿ ಶ್ರೀಕಾರ ಎಲ್ಲರೂ ಕೂಗಿ ಹೇಳುವ ಜೈಕಾರ

----------------------------------

ನೋಂದಣಿ ಐಡಿ : KPFS2-7320

2
Votes
134
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top