ಅಪ್ಪನ ಕಾಳಜಿ
ರಚನೆ : ಆಕಾಶ್ ಹಿರೇಮಠ್
----------------------------------
ಕೈ ಬೆರಳ ಹಿಡಿದು ನಡೆಗೆ ಕಲಿಸಿಕೊಟ್ಟಾತ ಬಿದ್ದಾಗ ನೊಂದ ಮನವ ಸಂತೈಸಿದಾತ ಹಾದಿ ತಪ್ಪಿದಾಗ ಕಣ್ಣಲೆ ಗದರಿದಾತ ಗದುರುವಿಕೆಯ ಗಡಸು ಧ್ವನಿಯಲೇ ಮಧುರ ಪ್ರೀತಿಯ ತುಂಬಿಕೊಂಡಾತ ಕಂದ ನೊಂದು ಕೊಂಡಾಗ ಯಾರಿಗೂ ತಿಳಿಯದಂತೆ ಕಣ್ಣಂಚಿನಲ್ಲಿ ನೀರು ಸುರಿಸಿದಾತ ಮಗುವಿನ ಭವಿಷ್ಯಕ್ಕಾಗಿ ಚಪ್ಪಲಿಯ ಸವಿಸಿದಾತ ತಾನು ಹರಕು ಬಟ್ಟೆ ತೊಟ್ಟು, ಸಂಸಾರದ ಹುಳುಕು ಮುಚ್ಚಿದಾತ ನಿನಗೆ ಬೇರೆ ಏನಾದರೂ ಹೆಸರು ಬೇಕೆ? ಅಪ್ಪಾ ಎಂದರೇ ಅಷ್ಟೆ ಸಾಕೆ...
----------------------------------
ನೋಂದಣಿ ಐಡಿ : KPFS2-7316